ಜಿಲ್ಲಾ ಪಂಚಾಯತು ಬಜೆಟ್; ಬದಿಯಡ್ಕ ಡಿವಿಜನಿಗೆ 60 ಲಕ್ಷ ರೂ‌.ಮಂಜೂರು


ಕಾಸರಗೋಡು: ಜಿಲ್ಲಾ ಪಂಚಾಯತಿನ ನೂತನ ಬಜೆಟ್ ನಲ್ಲಿ ಬದಿಯಡ್ಕ ಡಿವಿಜನಿಗೆ 60 ಲಕ್ಷ ರೂ ಅನುದಾನ ಲಭಿಸಿದೆಯೆಂದು ಜಿ.ಪಂ.ಸದಸ್ಯ    ಶ್ರೀ ರಾಮಪ್ಪ‌ ಮಂಜೇಶ್ವರ ಹೇಳಿಕೆಯಲ್ಲಿ ತಿಳಿಸಿದ್ದಾರೆ.. ಕ‌ನ್ನೆಪ್ಪಾಡಿ- ಮುಂಡಿತ್ತಡ್ಕ‌ ರಸ್ತೆಗೆ 50 ಲಕ್ಷ ರೂ, ಬದಿಯಡ್ಕ ಸರಕಾರಿ ಹೈಸ್ಕೂಲಿಗೆ 10 ಲಕ್ಷ ರೂ ಅನುದಾನ‌ ಲಭಿಸಿದೆ. ಮೊದಲ ಬಜೆಟಿನಲ್ಲಿಯೇ ಇಷ್ಟು ದೊಡ್ಡ ‌ಮೊತ್ತ ಅನುದಾನ ತಂದ ರಾಮಪ್ಪ ಮಂಜೇಶ್ವರ ಅವರಿಗೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ..‌ ಮುಂದೆಯೂ ಸಹ ಹಲವು ಅಭಿವೃದ್ದಿ‌ ಕಾರ್ಯಗಳು‌ ನಿಮ್ಮ ನೇತೃತ್ವದಲ್ಲಿ ‌ನಡೆಯಲಿ‌ ಎಂದು ಶುಭ ಹಾರೈಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು